ಜಗತ್‍ಪಿತಾ ಬ್ರಹ್ಮ ಮಂದಿರ ಭಾರತದ ರಾಜಸ್ಥಾನ ರಾಜ್ಯದ ಪುಷ್ಕರ್‌ನಲ್ಲಿ ಸ್ಥಿತವಾಗಿರುವ ಒಂದು ಹಿಂದೂ ದೇವಾಲಯವಾಗಿದೆ. ಇದು ಪವಿತ್ರ ಪುಷ್ಕರ್ ಸರೋವರದ ಹತ್ತಿರವಿದೆ. ಇದರ ದಂತಕಥೆಯು ಈ ಸರೋವರದೊಂದಿಗೆ ಅಚ್ಚಳಿಯದ ಸಂಪರ್ಕವನ್ನು ಹೊಂದಿದೆ. ಈ ದೇವಾಲಯವು ಭಾರತದಲ್ಲಿ ಹಿಂದೂ ಸೃಷ್ಟಿಕರ್ತ-ದೇವರಾದ ಬ್ರಹ್ಮನಿಗೆ ಸಮರ್ಪಿತವಾದ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಅವುಗಳಲ್ಲಿ ಪ್ರಮುಖವಾದದ್ದು. ದೇವಾಲಯದ ರಚನೆಯು 14 ನೇ ಶತಮಾನಕ್ಕೆ ಸೇರಿದ್ದೆಂದು ಕಾಲನಿರ್ಧಾರ ಮಾಡಲಾಗಿದೆ. ಭಾಗಶಃ ನಂತರ ಮರುನಿರ್ಮಿಸಲಾಗಿದೆ. ದೇವಾಲಯವು ಅಮೃತಶಿಲೆ ಮತ್ತು ಕಲ್ಲಿನ ಚಪ್ಪಡಿಗಳಿಂದ ರಚಿಸಲ್ಪಟ್ಟಿದೆ. ಇದು ವಿಶಿಷ್ಟವಾದ ಕೆಂಪು ಶಿಖರ ಮತ್ತು ಹಂಸ ಪಕ್ಷಿಯ ಅಲಂಕಾರಿಕ ಸಂಕೇತವನ್ನು ಹೊಂದಿದೆ. ದೇವಾಲಯದ ಗರ್ಭಗೃಹವು ನಾಲ್ಕು ತಲೆಯ ಬ್ರಹ್ಮ ಮತ್ತು ಅವನ ಪತ್ನಿ ಗಾಯತ್ರಿ (ವೇದಗಳ ದೇವತೆ) ಯ ವಿಗ್ರಹವನ್ನು ಹೊಂದಿದೆ. ಈ ದೇವಾಲಯದ ಆಡಳಿತವನ್ನು ಸನ್ಯಾಸಿ (ತಪಸ್ವಿ) ಪಂಥದ ಪುರೋಹಿತಶಾಹಿಯು ನಿರ್ವಹಿಸುತ್ತದೆ. ಕಾರ್ತಿಕ ಪೂರ್ಣಿಮೆಯಂದು ಬ್ರಹ್ಮನಿಗೆ ಸಮರ್ಪಿತವಾದ ಹಬ್ಬವನ್ನು ಆಚರಿಸಲಾಗುತ್ತದೆ. ಆಗ ಹೆಚ್ಚಿನ ಸಂಖ್ಯೆಯ ಯಾತ್ರಿಕರು ಪವಿತ್ರ ಸರೋವರದಲ್ಲಿ ಸ್ನಾನ ಮಾಡಿದ ನಂತರ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. == ಉಲ್ಲೇಖಗಳು == " " (). , ( ). 2006. () 9 2009. 29 2010. == ಹೊರಗಿನ ಕೊಂಡಿಗಳು ==